
ದಿನದ ಬಳಕೆ ಬಿಸಿನೀರಿಗೆ
ಬಳಸಿ ಸೌರ ಯಂತ್ರವ
ಭಜಿಸಿ ಸೌರ ಮಂತ್ರವ.
ಅಸ್ಥಿರತೆಯ ವಿದ್ಯುತ್ತಿಗೆ
ಹೂಡಿ ಈಗ ತಂತ್ರವ
ಹಾಡಿ ಬೇಗ ಅಂತ್ಯವ.
ಧಕ್ಕೆ ಇಲ್ಲ , ರೊಕ್ಕವಿಲ್ಲ
ಬಿಸಿಲ ಹಿಡಿದು ಬಳಸಲು
ಅಸಲು , ತುಂಬ ಉಳಿಸಲು
ಹೆಚ್ಚು ಹಣವೂ ನಾಶವಾಗಿ
ವಿದ್ಯುತ್ ಬಿಲ್ ಕಟ್ಟಲು
ಸಿಟ್ಟು ಬಂದು ಮೆಟ್ಟಲು.
ನಿನ್ನೆ ಕಾದ ನೀರು ಇಂದು
ಪೂರ್ಣ ಬಿಸಿ ಇರುವುದು
ಕ್ಷಣದಿ ಕೈಗೆ ಬರುವುದು.
ಅಡುಗೆ, ಸ್ನಾನ, ಬಟ್ಟೆ, ಪಾತ್ರೆ ,
ಮಾಡಿ ಮತ್ತೆ ತೊಳೆಯಲು
ಶುದ್ಧವಾಗಿ ಹೊಳೆಯಲು.
ಗೃಹ ಸಂಸ್ಥೆ ವಾಣಿಜ್ಯವೂ
ಸಾಕು, ಪಡದೆ ಅವಸ್ಥೆ
ಬಳಸಿರಿ ಈ ವ್ಯವಸ್ಥೆ.
ಸಹಿಸಿ ದಹಿಸಿ ಸಾಕಾಗಿದೆ
ಕೊಳ್ಳಿ ಸೌರ ಸೆಟ್ಟನು
ಕಂಡುಕೊಳ್ಳಿ ಗುಟ್ಟನು.
kavana chennagide.Soura shaktiya balake hecchali ennuvudu nanna aashaya.
ಪ್ರತ್ಯುತ್ತರಅಳಿಸಿTumbaa chennagide, kavanagal moolaka sora shaktiya prachaara tumbaa sundara
ಪ್ರತ್ಯುತ್ತರಅಳಿಸಿnimma kalakalige hatsup
ತುಂಬಾ inspiring ಆಗಿದೆ ನಿಮ್ಮ ಕವನ!
ಪ್ರತ್ಯುತ್ತರಅಳಿಸಿnice sir. Your rhythm is unique.
ಪ್ರತ್ಯುತ್ತರಅಳಿಸಿMessage is also good for usage of solar energy.
ಅರ್ಥಪುರ್ಣವಾಗಿದೆ. ಇಂತಹ ವಿಷಯವನ್ನೂ ಕವನವಾಗಿಸಿದ ನಿಮಗೆ
ಪ್ರತ್ಯುತ್ತರಅಳಿಸಿಅಭಿನಂದನೆಗಳು. ಸೋಲಾರ್, ಮುಂದಿನ ದಿನಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಲಿದೆ ನೋಡಿ.
:-)
ಪ್ರತ್ಯುತ್ತರಅಳಿಸಿLong live 'solar energy'
kindly enlighten me with one thing. my parents have been using the solar water heater for the past four years. after some years does the water stink? or is it only my veham (bhrame)!!!
(came here through Suma's blog. in Konkani we call it naagondige)
:-)
malathi S
ನಿಮ್ಮ ಪ್ರಶ್ನೆಗೆ ನನ್ನ ಉತ್ತರ.
ಪ್ರತ್ಯುತ್ತರಅಳಿಸಿಸಾಮಾನ್ಯವಾಗಿ ನಾಲ್ಕೈದು ವರ್ಷಗಳ ನಂತರ ನೀರು ದುರ್ನಾತಮಯವಾಗದು.ಯಾವುದಕ್ಕು ಮೂರ್ನಾಲ್ಕು ವರ್ಷಕ್ಕೊಮ್ಮೆ ಟ್ಯಾಂಕಿನ ವಳಭಾಗವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು.
ಧನ್ಯವಾದಗಳು.
ಸುಧಾಕಿರಣರೆ, ಸೌರಶಕ್ತಿಯ ಬಳಕೆಯನ್ನು ಕುರಿತಂತೆ ಬರೆದ ಕವನ ಚೆನ್ನಾಗಿದೆ. ಮತ್ತಷ್ಟು ವಿಚಾರಗಳಕವನ ಬರೆಯಿರಿ.
ಪ್ರತ್ಯುತ್ತರಅಳಿಸಿಸ್ನೇಹದಿಂದ,