ಮುಂಗಾರು ಮೆಲ್ಲಗೆ ಅಡಿಯಿಡುತ್ತಿದೆ . ಇಪ್ಪತ್ತೆರಡು ವರ್ಷಗಳ ಹಿಂದೆ ಬರೆದ ನನ್ನ ಮೊದಲ ಕವನ ಸಂಕಲನ " ಭಾವಧಾರೆ " ಯಲ್ಲಿದ್ದ ಈ ಕವನ , ನಿಮ್ಮ ಓದಿಗಾಗಿ -
ಎಡಬಿಡದೆ ಸುರಿಯುತಿದೆ
ಮುಂಗಾರ ಮೊದಲಮಳೆ
ಕುಡಿಯೊಡೆದು ಚಿಗುರುತಿದೆ
ಕಾದು ಕರಟಿರುವ ಗರಿಕೆ ನೆಲ
ಕವಿದ ಕಾರ್ಮೋಡಗಳ ಸೀಳುತಿದೆ
ಗುಡುಗು ಸಿಡಿಲುಗಳ ನಾರಾಚ
ಕಿವಿಗಪ್ಪಳಿಸುತಿದೆ ಬಿಡದೆ
ಭೋರ್ಗರೆವ ಮಳೆಯ ಅಹಿತರಾಗ
ಕವಿದ ಮೇಘಗಳ ಹಂದರಕೆ
ಹಗಲು ಇರುಳಾಗಿದೆ
ಸುರಿವ ಮಳೆಯ ಪ್ರಭಾವಕೆ
ತೊರೆಯುಕ್ಕಿ ಪ್ರವಹಿಸುತ್ತಿದೆ
ಝರಿಯ ಹನಿಯ ನಿಬಿಡತೆಗೆ
ಗೂಡ ಸೇರಿವೆ ಜೀವ ಸಂಕುಲವು
ಹರಿವ ನದಿಯ ಚೆಲುವಿಕೆಗೆ
ನವಿರೇಳುತಿದೆ ಮೈಮನವು
ಉಗಿದೇಳ್ವ ಸಿಡಿಲ ಆರ್ಭಟಕೆ
ಬಿರುಕೊಡೆಯುತಿದೆ ಎದೆಯೊಳು
ಪುಟಿದೇಳ್ವ ಬುಗ್ಗೆಯಂದಕೆ
ಹಗುರಾಗುತಿದೆ ಹೃದಯವು.
ಕವನ ಚೆನ್ನಾಗಿದೆ.ನನ್ನ ಬ್ಲಾಗಿಗೆ ಒಮ್ಮೆ ಭೇಟಿ ಕೊಡಿ .
ಪ್ರತ್ಯುತ್ತರಅಳಿಸಿಸುಧಾಕಿರಣ್ ಸರ್,
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ ಸರ್ ಕವನ..... ನವಿರಾದ , ಮಳೆಯನ್ತಿದೆ........ ತುಂಬಾ ಸರಳವಾಗಿ ವಿವರಿಸಿದ್ದೀರಾ.......... ನನ್ನ ಬ್ಲಾಗ್ ಕಡೆ ಬನ್ನಿ ಸರ್..........
ನಿಮ್ಮ ಕವನ ಓದಿ ಖುಶಿಯಾಯಿತು. ಆದರೆ ಮುಂಗಾರು ಮಳೆ ಇನ್ನೂ ಕಣ್ಣುಮುಚ್ಚಾಲೆ ಆಡುತ್ತಿರುವದು ಸಂಕಟಕ್ಕೆ ಕಾರಣವಾಗಿದೆ!
ಪ್ರತ್ಯುತ್ತರಅಳಿಸಿಈ ವರ್ಷವಾದರೂ ಒಳ್ಳೆಯ ಮಳೆಯ ನಿರೀಕ್ಷಿಸುತ್ತಿರುವ ನಮ್ಮೆಲ್ಲರಿಗೂ ನಿಮ್ಮ ಕವನ ಮಳೆಯನ್ನೇ ಸುರಿಸಿತು.......
ಪ್ರತ್ಯುತ್ತರಅಳಿಸಿಸುಂದರ ಕವನ...
ಕವನ ಸುಂದರವಾಗಿದೆ
ಪ್ರತ್ಯುತ್ತರಅಳಿಸಿಮೊದಲ ಮಳೆಯ ನೆನಪು ಕಾಡುತಿದೆ
Nice poem as usual from your favorite style!
ಪ್ರತ್ಯುತ್ತರಅಳಿಸಿಕವನ ಸುಂದರವಾಗಿದೆ ನಾಗ ಕಿರಣ್ ಸರ್
ಪ್ರತ್ಯುತ್ತರಅಳಿಸಿ