ಸೋಲಾರ್ ಗೀತೆಗಳು -ಕವನ ಸಂಕಲನದಿಂದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸೋಲಾರ್ ಗೀತೆಗಳು -ಕವನ ಸಂಕಲನದಿಂದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಫೆಬ್ರವರಿ 24, 2010

ಸೋಲಾರ್ ವಾಟರ್ ಹೀಟರ್


ದಿನದ ಬಳಕೆ ಬಿಸಿನೀರಿಗೆ
ಬಳಸಿ ಸೌರ ಯಂತ್ರವ
ಭಜಿಸಿ ಸೌರ ಮಂತ್ರವ.

ಅಸ್ಥಿರತೆಯ ವಿದ್ಯುತ್ತಿಗೆ

ಹೂಡಿ ಈಗ ತಂತ್ರವ

ಹಾಡಿ ಬೇಗ ಅಂತ್ಯವ.



ಧಕ್ಕೆ ಇಲ್ಲ , ರೊಕ್ಕವಿಲ್ಲ

ಬಿಸಿಲ ಹಿಡಿದು ಬಳಸಲು

ಅಸಲು , ತುಂಬ ಉಳಿಸಲು

ಹೆಚ್ಚು ಹಣವೂ ನಾಶವಾಗಿ

ವಿದ್ಯುತ್ ಬಿಲ್ ಕಟ್ಟಲು

ಸಿಟ್ಟು ಬಂದು ಮೆಟ್ಟಲು.



ನಿನ್ನೆ ಕಾದ ನೀರು ಇಂದು

ಪೂರ್ಣ ಬಿಸಿ ಇರುವುದು

ಕ್ಷಣದಿ ಕೈಗೆ ಬರುವುದು.


ಅಡುಗೆ, ಸ್ನಾನ, ಬಟ್ಟೆ, ಪಾತ್ರೆ ,

ಮಾಡಿ ಮತ್ತೆ ತೊಳೆಯಲು

ಶುದ್ಧವಾಗಿ ಹೊಳೆಯಲು.


ಗೃಹ ಸಂಸ್ಥೆ ವಾಣಿಜ್ಯವೂ

ಸಾಕು, ಪಡದೆ ಅವಸ್ಥೆ

ಬಳಸಿರಿ ಈ ವ್ಯವಸ್ಥೆ.

ಸಹಿಸಿ ದಹಿಸಿ ಸಾಕಾಗಿದೆ

ಕೊಳ್ಳಿ ಸೌರ ಸೆಟ್ಟನು

ಕಂಡುಕೊಳ್ಳಿ ಗುಟ್ಟನು.