ಬುಧವಾರ, ಫೆಬ್ರವರಿ 17, 2010

ಒಂದು ಸಂಜೆ

ಮೋಡಗಳ ದಂಡು,ನಡುವೆ
ಕೆಂಪಿನ ಚೆಂಡು.
ತಾರೆಗಳ ಮಿಣುಕು,ಒಡವೆ
ಬರುತಿದೆ ಹಿಂಡು.
ಆಗಸದ ಮುಖದಿ, ಮೊಡವೆ
ಮುಗಿಲಿನ ತುಂಡು.
ಚೇತನಕೆ ಇನ್ನು ಜಡವೆ?
ದೃಶ್ಯವ ಕಂಡು.
ಜಿಗಿಯುತಿರೆ ಸಾಂಬ ಕಡವೆ
ಸವಿಯನುಂಡು

4 ಕಾಮೆಂಟ್‌ಗಳು:

  1. ಕೊನೆಯ ವಾಕ್ಯವಂತೂ ಸುಂದರವಾಗಿದೆ. ಒಳ್ಳೆಯ ಕವನ. ಧನ್ಯವಾದ

    ಪ್ರತ್ಯುತ್ತರಅಳಿಸಿ
  2. ಸುಂದರ ಕವನ ಸರ್
    ಚಿಕ್ಕದಾಗಿ ಚೊಕ್ಕದಾಗಿ ೧೦೦ ಪುಟದಲ್ಲಿ ಹೇಳಲಾಗದ್ದನ್ನು
    ೪-೫ ಸಾಲಿನಲ್ಲಿ ಹೇಳಿದ್ದಿರಿ

    ಪ್ರತ್ಯುತ್ತರಅಳಿಸಿ