ಮಂಗಳವಾರ, ಫೆಬ್ರವರಿ 9, 2010

ಒಂದು ಬೆಳಗು

ಮುಗಿಲ ಹೆರಳಿಗೆ ಅರಳು
ಹಕ್ಕಿ ಹೂವಿನ ದಂಡೆ
ಗೌಜು ವಾಹನ ಶಬ್ದ
ಬಡಿದು ಎಬ್ಬಿಪ ಚಂಡೆ
ಕೆಲಸ ಬೆಟ್ಟವ ನೆನೆದು
ಕುದಿವ ದಿನದಾ ಮಂಡೆ

ಕಾಂಕ್ರೀಟು ಚಪ್ಪರದಿ
ಅಡಗಿ ಮಿರುಗುವ ತೊಂಡೆ
ಬಣ್ಣದೋಕುಳಿ ಚೆಲ್ಲಿ ಮತ್ತೆ
ಕರಗುವ ಹಂಡೆ
ನೀಲ ಬಯಲಲಿ ನಗುವ
ಜಗದ ದೇವನ ಕಂಡೆ

ಯಾವುದೂ ಗೋಜಿರದೆ
ಮಲಗಿಹವು ಕೆಲ ಬಂಡೆ
ಬೆಳಗು ಸೂರ್ಯನ ನೋಡು
ಒಮ್ಮೆಯಾದರು ಸಂಡೆ.

9 ಕಾಮೆಂಟ್‌ಗಳು:

 1. ಕವನದಲ್ಲಿಯ ಪ್ರತೀಕಗಳು ಮನ ಸೆಳೆಯುವಂತಿವೆ.

  ಪ್ರತ್ಯುತ್ತರಅಳಿಸಿ
 2. ಸೊಗಸಾದ ಕವನ...ಪ್ರಾಸದ ಜೊತೆ ವಿಚಾರವೂ ಇರುವುದು ಒನ್ನೊಂದು ಪ್ಲಸ್...ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 3. ಹಹಹಹ
  ಸರ್ ಕೊನೆಯ ಸಾಲು ತುಂಬಾ ತುಂಬಾ ವಾಸ್ತವ
  ತುಂಬಾ ಅರ್ಥಪೂರ್ಣ ಸಾಲುಗಳು

  ಪ್ರತ್ಯುತ್ತರಅಳಿಸಿ
 4. Chennagide kavana.
  dande chande nenedu mande
  tonde hande naguva kande
  bande nodu sande!
  Iduu ondu hanigavana vaagaballadallave?
  praasapriyaru paayasa priyaroo houdde?

  ಪ್ರತ್ಯುತ್ತರಅಳಿಸಿ
 5. ಅದ್ಭುತ ಹೋಲಿಕೆಗಳು. ಇ೦ಚರ ಹೇಳಿದ ಹಾಗೆ ಕೊನೆ ಸಾಲು ಸುಪರ್.

  ಪ್ರತ್ಯುತ್ತರಅಳಿಸಿ