ಕರಿಯನಾದರೆ ಏನು ಸ್ವಚ್ಛಂದ ಪ್ರೀತಿಯಿರೆ
ಬದುಕು ಸಾರ್ಥಕಗೊಳಲು ಬಣ್ಣ ಬೇಕೆ ?
ಬಿಳಿಯ ಬಣ್ಣದ ತೊಗಲು ಒಲವು ಒಣಗಿರುವ ಕೆರೆ
ಭಾವ ಬಾಯಾರಿಕೆಗೆ ಬಣ್ಣ ಸಾಕೆ?
ಬಣ್ಣಗಳು ಬದುಕನ್ನು ಹಸನುಗೊಳಿಸುವುದಿಲ್ಲ
ಪ್ರೀತಿ ನೇಗಿಲು ಉಳಲು ಭಾವ ಬೆಳೆಯು
ಸಹಜತಯು ಮುತ್ತುತಿರೆ ಮಣ್ಣಗುಣ ಮೆತ್ತುತಿರೆ
ಮೂಲ ಸಾರವ ಹೀರಿ ಬರಲು ಕಳೆಯು.
ಬಣ್ಣಗಳು ಮೂಲದಿಂ ಬಂದಿರಲು ಬದಲಿಸಲು
ಸಾಧ್ಯವಾಗದು ಸದ್ಯ, ಭಾವ ಮುಖ್ಯ
ಜೀವನದ ಕುಣಿಕೆಯಲಿ ಭಾವವೆಮ್ಮೆಣಿಕೆಯಲಿ
ಒಲವಿನಲಿ ಬೆಸಗೊಳಲು ಬೇಕು ಸಖ್ಯ.
ಕರಿಯನೋ ಬಿಳಿಯಳೋ ಬಣ್ಣಗಳು ಬೇಕಿಲ್ಲ
ಬಾಳು ಸಿಂಗರಗೊಳಲು ದ್ವೇಷ ನೂಕಿ
ಬಿಳಿಯಳೋ ಕರಿಯನೋ ಭಾವಗಳು ಯಾಕಿಲ್ಲ
ಬಾಳಬೇಕಿರುವ ದಿನ ಮೂರು ಬಾಕಿ.
ಒಲವು ಒಡಲೊಳಗಿರಲು ಮೈಬಣ್ಣವೆಂತಿರಲಿ
ಬಣ್ಣದೋಕುಳಿಯಾಟ ಬದುಕರಂಗ
ನಲವಸವಿ ನವಿಲಗರಿ ಮನದಲ್ಲಿ ಬಿಚ್ಚದಿರೆ
ಬಣ್ಣಬಣ್ಣದ ಕನಸು ಪೂರ್ಣ ಭಂಗ.
ತುಂಬ ಸುಂದರವಾದ ಗೀತೆ.
ಪ್ರತ್ಯುತ್ತರಅಳಿಸಿnice..
ಪ್ರತ್ಯುತ್ತರಅಳಿಸಿvisit my blog @ http://ragat-paradise.blogspot.com
RAGHU