ಶುಕ್ರವಾರ, ನವೆಂಬರ್ 4, 2011

ಹಕ್ಕಿ-ಹೂವು


ಹೂವಿಗೆ ಇಲ್ಲ ಬರ
ಹಸಿರು ಇಲ್ಲದಿದ್ದರೂ ಇದೆ ಉಸಿರು
ಒಣಗಿದ ಕೊಂಬೆ ಇಟ್ಟಂತೆ ಗೊಂಬೆ
ತುಂಬೆಲ್ಲ ಕಂಗೊಳಿಪ ಹಕ್ಕಿ ಹೂವು
ವಿಶ್ರಮಿಸಿ ಕೊಡುತ್ತವೆ ಕಾವು .
ಹೂವು ಅರಳುತ್ತವೆ ,
ರೆಕ್ಕೆ ಬಿಚ್ಚಿದಾಗ
ಮೊಗ್ಗಾಗುತ್ತವೆ , ಮುಚ್ಚಿದಾಗ
ರೆಂಬೆಗೊಂದರಂತೆ ಲೆಕ್ಕ , ಅರಳುವ ದಳಗಳೆ ಪುಕ್ಕ
ಹೂವಿಗೆ ಚಲನೆಯಿದೆ ಅತ್ತಿತ್ತ ಬಾಗುತ್ತವೆ
ಮತ್ತೆ ಕೂಗುತ್ತವೆ
ಪುನಃ ಸ್ವಸ್ಥಾನಕ್ಕೆ ಮರಳುತ್ತವೆ
ಹೂವು ಹಣ್ಣಾಗಿ ಬೀಜ ಕೊಡುವಂತೆ
ಹೂಹಕ್ಕಿ ಹಾಡಿ ಕೂಡಿ
ಬಿಳಿಹೂವ ಬೆಳೆಯುತ್ತವೆ
ಎಲ್ಲರ ಸೆಳೆಯುತ್ತವೆ.

1 ಕಾಮೆಂಟ್‌:

  1. ಸುಧಾಕಿರಣ್ ಸರ್,
    ಸಸ್ಯರಾಶಿ ಕೆಲಕಾಲ ಬರಡಾದರೇನಂತೆ? ಪಕ್ಷಿ ಸಂಕುಲ ಹೂವಾಗಿ ಕಾಣುವುದಲ್ಲ!!!

    ಹೋಲಿಕೆ ಇಷ್ಟವಾಯ್ತು, ಚಂದದ ಕವನ.

    ಪ್ರತ್ಯುತ್ತರಅಳಿಸಿ