ತಂಬೆಲರ ಕಾಡಿನಲಿ
ಪರಿಮಳದ ಜಾಡಿನಲಿ
ಕೋಗಿಲೆಯ ಹಾಡಿನಲಿ
ಚಿಗುರು ಚುಂಬನ ತುಟಿಯ ತುಂಟಿ ಚೈತ್ರ
ಬಣ್ಣ ಬಣ್ಣದ ಉಡುಪು
ತುಂಬು ಫಲಗಳ ಹಿಡಿಪು
ಭಾವಜೀವಿಗೆ ಮುಡಿಪು
ಮನವ ಸಾವಿರ ಸೆಳೆದ ಚೆಲುವ ಜೈತ್ರ
ಇಡಲು ಚೆನ್ನಡಿ ಕೆಳಗೆ
ಸುರಿವ ಸುಮಗಳ ಮಳೆಗೆ
ಕಣ್ಣು ತುಂಬಲು ಕಳೆಗೆ
ಭುವನಸುಂದರಿ ಬರುವು ಕೊಟ್ಟ ಸುಳಿವು
ಆಗಸದ ಕಡುನೀಲಿ
ಹೂಗೊಂಚಲಿನ ಡೋಲಿ
ಪ್ರಾಯಪ್ರೇಮದ ಕೇಲಿ
ಮುಳುಗಿ ಏಳಲು ನವುರ ಹರಯ ಕೊಳವು
ಮಾವು ಬೇವಿನ ಚಿಗುರು
ಅರೆಗಾಯಿಗಳ ಒಗರು
ಘಮಿಪ ಮರಗಳ ಅಗರು
ಸೂರ್ಯ ರಶ್ಮಿಯು ಇಳೆಗೆ ಸುರಿವ ಝಳವು
ಪರಿಮಳದ ಜಾಡಿನಲಿ
ಕೋಗಿಲೆಯ ಹಾಡಿನಲಿ
ಚಿಗುರು ಚುಂಬನ ತುಟಿಯ ತುಂಟಿ ಚೈತ್ರ
ಬಣ್ಣ ಬಣ್ಣದ ಉಡುಪು
ತುಂಬು ಫಲಗಳ ಹಿಡಿಪು
ಭಾವಜೀವಿಗೆ ಮುಡಿಪು
ಮನವ ಸಾವಿರ ಸೆಳೆದ ಚೆಲುವ ಜೈತ್ರ
ಇಡಲು ಚೆನ್ನಡಿ ಕೆಳಗೆ
ಸುರಿವ ಸುಮಗಳ ಮಳೆಗೆ
ಕಣ್ಣು ತುಂಬಲು ಕಳೆಗೆ
ಭುವನಸುಂದರಿ ಬರುವು ಕೊಟ್ಟ ಸುಳಿವು
ಆಗಸದ ಕಡುನೀಲಿ
ಹೂಗೊಂಚಲಿನ ಡೋಲಿ
ಪ್ರಾಯಪ್ರೇಮದ ಕೇಲಿ
ಮುಳುಗಿ ಏಳಲು ನವುರ ಹರಯ ಕೊಳವು
ಮಾವು ಬೇವಿನ ಚಿಗುರು
ಅರೆಗಾಯಿಗಳ ಒಗರು
ಘಮಿಪ ಮರಗಳ ಅಗರು
ಸೂರ್ಯ ರಶ್ಮಿಯು ಇಳೆಗೆ ಸುರಿವ ಝಳವು
ಸುಧಾಕಿರಣ್..
ಪ್ರತ್ಯುತ್ತರಅಳಿಸಿಸೊಗಸಾದ
ಸುಂದರ ಕವನ...!
ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು....
sudhaakiranare bahala dinagala mele naagandigeyallirisida chaitrada sobagina siriya sundara kavana manasuregondide.
ಪ್ರತ್ಯುತ್ತರಅಳಿಸಿugadi shubhaashayagalu -sitaram
ಚೈತ್ರದ ಆಗಮನವನ್ನು ಸಾರುವ ಸೊಗಸಾದ ಕವನ. ಯುಗಾದಿಯ ಶುಭಾಶಯಗಳು.
ಪ್ರತ್ಯುತ್ತರಅಳಿಸಿ